- ರವಿಶಂಕರ್ ಶಾಸ್ತ್ರಿ
ಲೇಖಕರು: ಜಯಂತ ಕಾಯ್ಕಿಣಿ
ಬೆಲೆ: ರೂ.೧೨೦
ಸುಮಾರು
೨೩ ವರ್ಷಗಳ ಕಾಲ ಮುಂಬಯಿಯಲ್ಲಿ ಕೆಲಸ ಮಾಡಿದ ಜಯಂತ್, ಅಲ್ಲಿನ ಜನ ಜೀವನದ ಕಡೆಗೆ ಬೆಳಕು
ಚೆಲ್ಲಿದ್ದಾರೆ. ವಿವಿಧ ಜೀವನ ಶೈಲಿಯ ಚಿತ್ರಣ ನಮಗೆ ಸಿಗುತ್ತದೆ. ಹೆಚ್ಚಿನ ಲೇಖನಗಳು
ಬಿಡಿ ಬರಹಗಳಾಗಿದ್ದರೂ, ನಮ್ಮನ್ನು ಚಿಂತನೆಗೆ ಹಚ್ಚುವಂತೆ ಇವೆ.
ಉದಾಹರಣೆಗೆ, 'ಲೈವ್' ಎಂಬ ಬರಹ. ಇಂದಿನ ಮಾಧ್ಯಮಗಳು ನಮ್ಮ ಸಮಾಜದಲ್ಲಿ ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ತೋರಿಸುವ ಅತಿರೇಕಗಳನ್ನು ನೇರವಾಗಿ ಪ್ರಶ್ನಿಸಿದಂತೆ ಇದೆ. ಬೇಕಾದ, ಬೇಡವಾದ ಎಲ್ಲ ಸುದ್ದಿಗಳನ್ನು ನಮ್ಮ ಮನೆಯೊಳಗೆ ತಂದು ತೋರಿಸುವ ಟಿವಿ, ಪೇಪರ್ ಗಳು ಯಾವ ಮಟ್ಟದಲ್ಲಿ ತಮ್ಮ ಮಿತಿ ಮೀರುತ್ತವೆ ಎಂಬುದು ನಾವೆಲ್ಲರೂ ಯೋಚಿಸಬೇಕಾದ ಅಗತ್ಯ. ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಮಾನವೀಯತೆ ಮರೆಯುತ್ತಿದ್ದೇವಾ ಅನಿಸುತ್ತದೆ ಒಮ್ಮೊಮ್ಮೆ.

ದಿನನಿತ್ಯದ
ಜೀವನದ ಬೇರೆ ಬೇರೆ ಸಂಗತಿಗಳನ್ನು, ಸಾಮಾನ್ಯವಾಗಿ ನೋಡುವ ರೀತಿಯಲ್ಲಲ್ಲದೆ ಇನ್ನೊಂದು ದೃಷ್ಟಿಕೋನದಿಂದ ಕಾಣುವ, ವಿಶ್ಲೇಷಿಸುವ ಕಾಯ್ಕಿಣಿ ಜಾಣ್ಮೆ ತಲೆದೂಗುವಂತಿದೆ. ಚಿಕ್ಕ ಚಿಕ್ಕ
ಸಂಗತಿಗಳನ್ನು ಲೇಖಕರು ಕೂಲಂಕುಷವಾಗಿ ಗಮನಿಸಿರುವುದು ಕಾಣುತ್ತದೆ. ಸಣ್ಣ ವಿಷಯಗಳನ್ನು
ಕೂಡ ನೋಡಿ, ಅದರ ಬಗ್ಗೆ ಬರೆಯುವ ಕಲೆ ಅವರಿಗೆ ಒಲಿದಿದೆ.
ಯಾವಾಗಿನ
ಹಳಸಲು ವಿಷಯಗಳನ್ನೇ ಓದಿ ಬೇಸರವಾಗಿದ್ದರೆ, ಈ ಪುಸ್ತಕ ವಿಭಿನ್ನವಾಗಿ ಕಾಣುತ್ತದೆ.
ವೈವಿಧ್ಯಮಯ ವಿಷಯಗಳನ್ನು ಲೇಖಕರು ಆರಿಸಿದ್ದಾರೆ, ವಿವರಿಸಿದ್ದಾರೆ. ಬದಲಾವಣೆ ಬಯಸುವ
ಓದುಗರಿಗೆ ಇದು ಒಳ್ಳೆಯ ಪುಸ್ತಕ.
No comments:
Post a Comment