ಕೋಶ ಓದು: The Monk Who Sold His Ferrari (ಫೆರಾರಿ ಮಾರಿದ ಫಕೀರ)

ಲೇಖಕರು : ರಾಬಿನ್ ಶರ್ಮಾ
- "ಶ್ರೀ"ಖಾರ


ಯಾವತ್ತೂ ಕನ್ನಡ ಬಿಟ್ಟು ಬೇರೆ ಭಾಷೆಯ ಯಾವುದೇ ಪುಸ್ತಕ ಓದದ ನನಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಪಡೆದುಕೊಳ್ಳಲು ಗೆಳೆಯನ ಹತ್ತಿರ ಪಡೆದು ನಾನು ಓದಿದ ಮೊಟ್ಟ ಮೊದಲ ಇಂಗ್ಲೀಷ್ ಪುಸ್ತಕ ಇದು. ಒಬ್ಬ ವ್ಯಕ್ತಿ ತನ್ನ ಜೀವತಾವಧಿಯಲ್ಲಿ ಓದಲೇ ಬೇಕಾದಂತಹ ಪುಸ್ತಕ . ಈಗಿನ ಜಗತ್ತಿನಲ್ಲಿ ಜನರೆಲ್ಲಾ ದುಡ್ಡಿನ ಹಿಂದೆ ಹೋಗಿ ಜೀವನದ ಪ್ರತಿಯೊಂದು ಅಮೂಲ್ಯದ ಕ್ಷಣಗಳನ್ನ ಕಳೆದುಕೊಳ್ಳುತ್ತಿದ್ದಾರೆ.
ದುಡ್ಡೇ ಎಲ್ಲಾ ಅಲ್ಲ. ಸಂತೋಷವಾಗಿರಬೇಕು ಅಂದರೆ ಜೀವನದ ಪ್ರತಿಯೊಂದು ಕ್ಷಣವನ್ನೂ ಅನುಭವಿಸಬೇಕು ಅಂತ ತಿಳಿ ಹೇಳುವುದಕ್ಕೆ ಸಾಕಷ್ಟು ಉದಾಹರಣೆಗಳು ಮತ್ತು ಅನುಭವದ ಮಾತುಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಈ ಪುಸ್ತಕ ಓದಿದ ಮೇಲೆ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಮನುಷ್ಯ ಎಲ್ಲರ ಜೊತೆ ಕಾಲ ಕಳೆಯಬೇಕು. ಹಾಗೆಯೇ ತನ್ನ ಜೊತೆಗೂ ಕಾಲ ಕಳೆಯಬೇಕು. ನಮ್ಮ ಮನಸ್ಸಿನ ಜೊತೆ ನಾವೇ ಮಾತನಾಡಿಕೊಳ್ಳಬೇಕು. ಹಣ, ಸಂಪತ್ತು ಅಂತ ಕಾಲ ಕಳೆಯದೆ, ಮಕ್ಕಳ ಜೊತೆ ಆಟ ಆಡಬೇಕು, ಕುಟುಂಬದ ಜೊತೆ ಊಟ ಮಾಡಬೇಕುಗೆಳೆಯರ ಜೊತೆ ಪಾರ್ಟಿ ಮಾಡಬೇಕು. ಹೀಗೆ ಜೀವನದ ಪ್ರತಿಯೊಂದು ಕ್ಷಣವನ್ನೂ ಪ್ರೀತಿಸಬೇಕು. ಅದೇ ಈ ಪುಸ್ತಕದ ಸಾರಾಂಶ. 
ಒಂದು ಕಾಡು ಅಲ್ಲಿ ನಾವು ಕಾಲು ಜಾರಿ ಒಂದು ಗುಂಡಿಯೊಳಗೆ ಬಿದ್ದಿದ್ದೀವಿ. ಕೊನೆಗೆ ಆಸರೆಯಂತೆ ಒಂದು ಮರಕ್ಕೆ ಕಟ್ಟಿದ್ದ ಹಗ್ಗ ಸಿಕ್ಕಿದೆ. ಆದರೆ ಗುಂಡಿಯಿಂದ ಮೇಲೆ ಬಂದರೆ ಅಲ್ಲಿ ಹುಲಿಯೊಂದು ನಮಗಾಗಿ ಕಾದು ಕುಳಿತಿದೆ. ಹೋಗಿ ಹಳ್ಳದಲ್ಲಾದರೂ ಬಿದ್ದು ಬಿಡೋಣವೆಂದರೆ ಅಲ್ಲಿ ಹಾವೊಂದು ಹೆಡೆ ಎತ್ತಿ ಕುಳಿತಿದೆ. ಹಗ್ಗ ಹಿಡಿದು ಮರದ ಮೇಲೆ ಹೇಗಾದರೂ ಹತ್ತಿ ಬಿಡೋಣ ಅಂದರೆ, ಏನಾಶ್ಚರ್ಯ ಅಳಿಲೊಂದು ಆಗಲೇ ಜೋತು ಬಿದ್ದಿರುವ ಹಗ್ಗವನ್ನು ತನ್ನ ತೀಕ್ಷ್ಣ ಹಲ್ಲುಗಳಿಂದ ಹಟಕ್ಕೆ ಬಿದ್ದ ಹಾಗೆ ಕಡಿಯುತ್ತಿದೆ.
ಹೀಗಿರುವಾಗ ಅಲ್ಲೆಲ್ಲೋ ಮರದಲ್ಲಿ ಕಟ್ಟಿರುವ ಜೇನಿನ ಗೂಡಿನಿಂದ ಜೇನು ತುಪ್ಪವು ಕೆಳಗೆ ಸುರಿಯುತ್ತಿರಲು, ನಿನಗೆ ಈ ಕ್ಷಣ ನನ್ನದು ಎಂದು ಅ ಜೇನಿನ ಸಿಹಿ ಯನ್ನು ಸವಿಯುವಂತವನಾಗಿರಬೇಕು. ಈ ಪುಸ್ತಕ ಓದಿದರೆ ನಿಮಗೆ ಹೇಗೆ ಜೇನಿನ ಸವಿಯನ್ನ ಅನುಭವಿಸಬೇಕು ಎನ್ನುವುದು ಗೊತ್ತಾಗುತ್ತದೆ.

No comments:

Post a Comment