- ವೆಂಕಟೇಶ್ ಶೇಷಗಿರಿ
ಪಿರಿಯಾಪಟ್ಟಣದ ಬೆಟ್ಟದಪುರದ ಸಮೀಪವಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತಬೇಕೆಂದು ನಿಶ್ಚಯಿಸಿ ಮೂರು ವಾರಗಳಿಂದ ಮುಂದೂಡುತ್ತಾ ಕೊನೆಗೂ ನವೆಂಬರ್ ೨೩ನೇ ತಾರೀಖು ಹತ್ತೋಣವೆಂದು ಅಂತಿಮ ನಿರ್ಧಾರ ಮಾಡಿ ನಾನು ಮತ್ತು ನನ್ನ ಗೆಳೆಯರೆಲ್ಲರೂ ಮೈಸೂರಿನಿಂದ ಹೊರಟೆವು. ೨೦೨೬ ರ ಮೇ ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣಕ್ಕೆ ಹೋಗುವುದೆಂದು ಈಗಾಗಲೇ ಎಲ್ಲರೂ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ಈ ರೀತಿಯ ಹಲವಾರು ಚಾರಣಗಳನ್ನು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಮಾಡಬೇಕಿದೆ.