ಮನ್ನಿಸು ಶ್ರೀಹರಿಯೇ

- ರಾ. ಶಾಂ.

ನಿನ್ನ ಮರೆತೆನು ಶ್ರೀಹರಿಯೇ 
ಮನ್ನಿಸೆನ್ನನು

ಅರಿವಿಲ್ಲದೆ ಹೊರಳಾಡಿದೆ 
ಗುರಿಯಿಲ್ಲದೆ ಪರದಾಡಿದೆ  
ಮನಸಿನಲ್ಲೇ ತೊಳಲಾಡಿದೆ

ಲೋಕದ ರೂಢಿಯನರಿಯದೆ 
ಕ್ಷಣಿಕಾಕರ್ಷಣೆಗಳ ತಿಳಿಯದೆ 
ಅಂತರಂಗವನರಿಯದೆ

ಅಡಿಗಡಿಗೂ ಮುನ್ನಡೆಸಿದ 
ಅಡೆತಡೆಗಳ ನಿವಾರಿಸಿದ 
ಹೊಸಬೆಳಕ ತೋರಿಸಿದ 

ಜಗವನೆ ಮರೆಸುವ 
ಅನವರತ ಕಾಯುವ
ಮುಕ್ತಿಯ ತೋರುವ  

ನಿನ್ನ ಮರೆತೆನು ಶ್ರೀಹರಿಯೇ 
ಮನ್ನಿಸೆನ್ನನು

No comments:

Post a Comment