- ಮಂಜುನಾಥ್ ಪಿ.
ಮಳೆಯಲಿ ನಿನ್ನ ನೋಡಿದ ಆ ದಿನ
ಜಗವನ್ನೇ ಮರೆತು ಬೆರಗಾದೆನಾ
ಘಾಸಿಯಾಯ್ತು ನನ್ನ ಮನ
ತಗುಲಿ ನಿನ್ನ ಕಣ್ಣೋಟದ ಬಾಣ
ಗಾಯಗೊಂಡ ಮನಕೆ ಚಿಕಿತ್ಸೆ ನೀಡದೆ ನೀನು
ಅಪಘಾತ ನಡೆಸಿ ಮರೆಯಾದೆಯಲ್ಲವೇನು
ಅಂದಿನಿಂದ ನಿದ್ರೆ ಸನಿಹ ಸುಳಿಯುತಿಲ್ಲ
ಕಾರಣ ಕೇಳಲು ಬಳಿಯಲಿ ನೀನಿಲ್ಲ
ನನ್ನ ನೆನ್ನೆ ನಾಳೆಗಳು ನೀನು
ನೀನಿಲ್ಲದೆ ಬದುಕೆನು ಇಳೆಯಲಿ ನಾನು
ಏಕೆ ನನ್ನ ಮನವ ಕಲಕಿದೆ ಗೆಳತಿ
ಹತ್ತಿರ ಬಾರದೆ ಕಾಡುವೆಯಲ್ಲ ಮನದೊಡತಿ
ದಶಕಗಳುರುಳಿದರೂ ಹಚ್ಚಹಸಿರಾಗಿರುವ ನಿನ್ನ ನೆನಪ
ನೀನೊಮ್ಮೆ ವೀಕ್ಷಿಸಬಾರದೆ ಸುಳಿದು ಸಮೀಪ
No comments:
Post a Comment