ಅಸೀಮ ಕರ

 - ಮೌನ
ಕೊನೆಗೊಮ್ಮೆ ನಾನು ನನ್ನ ನಾಜೂಕಿನ 
ಅಂತರಂಗದ ಸುತ್ತ ತಡೆಗೋಡೆಯೊಂದನು ಕಟ್ಟುವೆ 

ಒಂದು ತಪ್ಪಿನ ಕತೆ

- ಮಂಜುನಾಥ್ ಪಿ.
ಏನೋ ಇದೆ ನಮ್ಮಗಳ ನಡುವೆ 
ಜಗದಗಲಕೂ ನೀ ಹುಡುಕುತಲಿರುವೆ

ಮನವೆಂಬ ತೂಗುಯ್ಯಾಲೆ

- ಮೌನ
ದೀರ್ಘ ಪಯಣದ ಛಲಕ್ ಒಂದು 
ಮನದ ಪರದೆಯಲ್ಲಿ ಸುಳಿದಾಗ 

ಹುಚ್ಚೇಗೌಡರ ಕತೆ - ಭಾಗ ೩

 - ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಮೂರನೆಯ ಭಾಗ. ಮೊದಲೆರಡು ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 
ನಾಲ್ಕನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಕಾಣದೂರ ಕಡೆಗೆ : ತಡಿಯಂಡಮೋಳ್ ಬೆಟ್ಟ, ಕೊಡಗು ಜಿಲ್ಲೆ

- ವೆಂಕಟೇಶ್ ಶೇಷಗಿರಿ

ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಚಾರಣಕ್ಕೆ ಹೋಗುವುದೆಂದು ಈಗಾಗಲೇ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ಈ ರೀತಿಯ ಹಲವಾರು ಚಾರಣಗಳನ್ನು ಮಾಡಬೇಕೆಂದು ನಾನು ಮತ್ತು ನನ್ನ ಸ್ನೇಹಿತರು ನಿರ್ಧರಿಸಿದ್ದೆವು. ಇವುಗಳಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ. ಆಸಕ್ತರು ಓದಿ. ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಾರಣದ ನಂತರ ಸರಿಸುಮಾರು ಮೂರು ತಿಂಗಳವರೆಗೆ ಜೀವನದ ಅನಿವಾರ್ಯ ಕಾರ್ಯದೊತ್ತಡಗಳ ನಡುವೆ ಸಿಲುಕಿ ಚಾರಣದಿಂದ ಬಿಡುವು ತೆಗೆದುಕೊಂಡೆವು. 

ಮರಳಿನ ಮೇಲಿನ ರಕ್ತದ ಕಲೆ

 - ಜಿ. ಮಿಥುನ್

ಗಾಜಿನ ಅರಮನೆಯಲ್ಲಿ ಕುಳಿತವರು ದಾಳ ಉರುಳಿಸಿದರು,
ದೂರದ ಮರಳುಗಾಡಿನಲ್ಲಿ ಮಣ್ಣಿನ ಮನೆಗಳು ಉರಿದವು.

Benefit of Doubt: ಮಾನವೀಯತೆಯ ಹೊಸ ದೃಷ್ಟಿಕೋನ

  - ರಾಘವೇಂದ್ರ ಎಸ್

ನಾನು ಹೊಸದಾಗಿ ಕೆಲಸಕ್ಕೆ ಸೇರಿಕೊಂಡಾಗ ಮ್ಯಾನೇಜರ್ ಗಳ ನಡುವೆ ಇರೋ ಸಂಬಂಧಗಳ ಪ್ರಾಮುಖ್ಯತೆ ಇನ್ನೂ  ತಿಳಿದಿರಲಿಲ್ಲ. ಸಾಮಾನ್ಯವಾಗಿ ಇಬ್ಬರ ನಡುವೆ ಇರೋ ಪರಸ್ಪರ ತಿಳುವಳಿಕೆಗಳೇ ಆ ಸಂಬಂಧಗಳು ಬಹುಕಾಲ ಉಳಿಯುವಂತೆ ಮಾಡುತ್ತವೆ. ಒಂದೆರಡು ವರ್ಷಗಳ ಅನುಭವದ ನಂತರ, ಅತಿರಥ ಮಹಾರಥ  ಮ್ಯಾನೇಜರ್ ಗಳನ್ನು ನೋಡಿದ ಮೇಲೆ ಒಬ್ಬ ಒಳ್ಳೆಯ ಮ್ಯಾನೇಜರ್ ನ ಪ್ರಾಮುಖ್ಯತೆ ನನಗೆ ಅರ್ಥವಾಗತೊಡಗಿತ್ತು.

ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು

 - ರವಿಕುಮಾರ್ ಎಂ.ಎಸ್.

ಇತ್ತೀಚೆಗೆ ನನ್ನ ಆತ್ಮೀಯ ಸ್ನೇಹಿತರೊಬ್ಬರು ನಾನು ಭಾಗವಹಿಸಿದ್ದ Toastmaster ಸಭೆಯಲ್ಲಿ  "ಡೋಪಮೈನ್ " ಎಂಬ ನಿರೂಪಣಾ  ವಿಷಯವನ್ನಿಟ್ಟುಕೊಂಡು, ಡೋಪಮೈನ್ ಎಂದರೇನು ಎಂಬ ಸಣ್ಣ ವಿವರದಿಂದ ಶುರು ಮಾಡಿ, ಸಾಮಾಜಿಕ ಜಾಲತಾಣಗಳ ಹಿಂದಿರುವ ದೊಡ್ಡ ಕಂಪೆನಿಗಳು ಹೇಗೆ ಮನುಷ್ಯನಲ್ಲಿ ಡೋಪಮೈನ್ ಬಿಡುಗಡೆಯಾಗುವ ಕ್ರಿಯೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ನಮ್ಮಲ್ಲಿ ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಕಾರಣವಾಗಿವೆ ಹಾಗೂ ಇದರ ಅಡ್ಡ ಪರಿಣಾಮಗಳೇನು ಎಂಬುದನ್ನು ವೈಜ್ಞಾನಿಕ ಆಧಾರಗಳೊಂದಿಗೆ ಮನ ಮುಟ್ಟುವಂತೆ ವಿವರಿಸಿದರು. ನಿಮಗೆ ಅದರ ವಿವರಗಳು ಬೇಕೆಂದಲ್ಲಿ, ಇಲ್ಲಿ ಕ್ಲಿಕ್ ಮಾಡಿ -ಡೊಪಮೈನ್ ಎಂಬ ಸೂತ್ರಧಾರ. ಸಭೆಯ ಕೊನೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಓದಿದ್ದ ಪುಸ್ತಕಗಳನ್ನು ಪ್ರಸ್ತಾಪಿಸಿದ್ದರು. ಡೋಪಮೈನ್ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿಯಲು ಕೆಲವು ಪುಸ್ತಕಗಳನ್ನು ಓದಲು ಸೂಚಿಸಿದರು. ಅದರಲ್ಲಿ  “Dopamine Detox" ಎಂಬ ಪುಸ್ತಕ ಕೂಡ ಒಂದು. 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 2 – ಆಪರೇಷನ್ ಚೀಫ್ ಗೆಸ್ಟ್

- ಜ್ಞಾನೇಶ್ ಸಿ.ಎಂ. 

[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ಆಧರಿಸಿ ಲೇಖನಮಾಲೆಯೊಂದನ್ನು ರಚಿಸಿದ್ದಾರೆ.
ಈ ಲೇಖನಮಾಲೆಯ  ಎರಡನೆಯ ಬರಹ ಇದು. ಮೊದಲನೆಯ ಭಾಗಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 


ಮೋಹನ್ ಮೂರ್ತಿ ಮಾ.ಕೆಂ.] 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 1 – ಬೆನ್ನಿಗೆ ಬಿದ್ದ ಚೂರಿ

- ಜ್ಞಾನೇಶ್ ಸಿ.ಎಂ. 


[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಈ ಲೇಖನದಲ್ಲಿ ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ಈ ಲೇಖನ ಮಾಲೆ ಹಲವು ಭಾಗಗಳಲ್ಲಿ ಪ್ರಕಟಗೊಳ್ಳುತ್ತದೆ. 
- ಮೋಹನ್ ಮೂರ್ತಿ ಮಾ.ಕೆಂ.] 

ಶಟಲ್ ಆಟ, ಆ ಸುಂದರ ಹುಡುಗಿ ಮತ್ತು ಮಾಸ್ತರ ಬೆತ್ತದ ಸೇವೆ!

 - ಮಂಜುನಾಥ್ ಪಿ


ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಯಸಳೂರು ಎಂಬ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ  ಓದಿದ್ದ ನೆನಪುಗಳು ನನ್ನನ್ನು ಯಾವಾಗಲೂ ಕಾಡುತ್ತಿರುತ್ತವೆ. ನೀವೆಲ್ಲರೂ ಭಾವಿಸಿರಬಹುದು ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಪಾಠಗಳು ಸರಿಯಾಗಿ ನಡೆಯುವುದಿಲ್ಲ. ಕೆಲವು ವಿಷಯಗಳನ್ನು ಪಾಠ ಮಾಡಲು ಗುರುಗಳು ಇರುವುದಿಲ್ಲವೆಂದು. ಆದರೆ ನಮ್ಮ ಯಸಳೂರು ಶಾಲೆ ಇದಕ್ಕೆ ಅಪವಾದವಾಗಿತ್ತು. 

ರಕ್ತದಾನ: ಸಮಾಜದ ಋಣ ತೀರಿಸುವ ಹಾದಿ

- ರವಿಕುಮಾರ್ ಎಂ.ಎಸ್.

ಕೆಲವು ವಾರಗಳ ಕೆಳಗೆ ನಾನು ರಕ್ತದಾನ ಮಾಡಲು ಎಂದಿನಂತೆ ನಾನು ಹೋಗುವ ರಕ್ತನಿಧಿ ಕೇಂದ್ರಕ್ಕೆ ಹೋದೆ. ಅಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ವಹಿಸುವ ಓರ್ವ ವ್ಯಕ್ತಿಯನ್ನು ಹಾಗೇ ಮಾತಿಗೆಳೆದಾಗ, ರಕ್ತದಾನದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅದಾಗಿ ಕೆಲವು ದಿನಗಳು ಕಳೆಯಿತು. ಒಂದು ದಿವಸ ನಾನು ನನ್ನ ಆಪ್ತ ಮಿತ್ರನ ಜೊತೆ ಮಾತನಾಡುವಾಗ ರಕ್ತನಿಧಿ ಕೇಂದ್ರದ ವ್ಯಕ್ತಿ ನೀಡಿದ ಮಾಹಿತಿಗಳನ್ನು ಪ್ರಸ್ತಾಪಿಸಿದೆ. ನನ್ನ ಮಿತ್ರ ನೀನ್ಯಾಕೆ ಈ ಉಪಯುಕ್ತ ವಿಷಯವನ್ನು ವಿಸ್ತೃತ ಲೇಖನದ ಮೂಲಕ ಇತರರಿಗೆ ಹಂಚಿಕೊಳ್ಳಬಾರದು. ಇದರಿಂದ ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ನೀಗಲು ಸಹಾಯವಾಗಬಹುದು ಇದರ ಜೊತೆಗೆ ರಕ್ತದಾನ ಮಾಡಲು ಹಲವರಿಗೆ ಪ್ರೇರೇಪಣೆ ನೀಡಬಹುದು ಎಂದು ಸಲಹೆಯಿತ್ತರು. ಅವರ ಹೇಳಿದ ಮಾತುಗಳು ನನಗೆ ಸರಿ ಅನಿಸಿತು. ಅದರ ಫಲಿತಾಂಶವೇ ಈ ಲೇಖನ. 

ಹುಚ್ಚೇಗೌಡರ ಕತೆ - ಭಾಗ ೨

- ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಹಲವು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಎರಡನೆಯ ಭಾಗ. ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ ಹುಚ್ಚೇಗೌಡರ ಕತೆ - ಭಾಗ ೧. ಮೂರನೇ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಅಭಿಪ್ರಾಯಗಳ ಬಗ್ಗೆ ನನ್ನ ಅಭಿಪ್ರಾಯ

 - ವಂದನಾ ಎನ್


ಹೀಗೊಂದು ದಿನ ನನ್ನ ಗೆಳೆಯನ ಜೊತೆ ಮಾತುಕತೆ ನಡೆಯುತ್ತಿತ್ತು. ಸರಳ ವಿಷಯದಿಂದ ಶುರುವಾದ ಮಾತು ನಿಧಾನವಾಗಿ ಗಂಭೀರ ಚರ್ಚೆಯಾಗಿಬಿಟ್ಟಿತು. ನಾನು ಅವನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಕ್ರಿಯೆ ನೀಡಲು ಮುಂದಾದಾಗ, ಅವನು ತುಂಬಾ ಶಾಂತವಾಗಿ, “ಡಿಫೆನ್ಸಿವ್ ಆಗ್ಬೇಡ, ನಾನು ನನ್ನ ಅಭಿಪ್ರಾಯ ಹೇಳ್ತಿದ್ದೀನಿ ಅಷ್ಟೇ” ಎಂದ. ಆ ಕ್ಷಣದಲ್ಲಿ, ನಡೆಯುತ್ತಿದ್ದ ಚರ್ಚೆಗಿಂತ ಆ ಒಂದು ಸಾಲು ನನ್ನ ಮನಸ್ಸನ್ನು ಆವರಿಸಿಕೊಂಡಿತು. 

ಕವನ ಗುಚ್ಛ

- ಮೌನ

ಅವಶೇಷಗಳು


ಮನದ ತುಂಬಾ ಒಲವು ತುಂಬಿದ್ದರೂ 

ಕೆಲವೊಮ್ಮೆ ವಿಧಿನಿಯಮ

ನಮ್ಮ ಬಾಹುಗಳಲಿ ಬಂಧಿಸಲಾಗುವುದಿಲ್ಲವೆನ್ನುವುದೇ

ನೋವಿನ ಸಂಗತಿ

ಗಣಿತದ 'ಮಿತಿ' ಮತ್ತು ಬದುಕಿನ 'ಗತಿ': ಒಂದು ಪುಸ್ತಕದ ಮುನ್ನುಡಿ ಕಲಿಸಿದ ಪಾಠ

- ವೆಂಕಟೇಶ್ ಶೇಷಗಿರಿ

೨೦ ವರ್ಷದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾನು ಹಲವಾರು ರೀತಿಯ ಸಹುದ್ಯೋಗಿಗಳನ್ನು ನೋಡಿದ್ದೇನೆ. ಅದರಲ್ಲಿ ಕೆಲವರು ತಮ್ಮ ವ್ಯಕ್ತಿತ್ವದಿಂದ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ನಾನು ಇನ್ಫೋಸಿಸ್ನಲ್ಲಿ ಕೆಲಸ ಮಾಡುವಾಗ ನನ್ನ ಮ್ಯಾನೇಜರ್ ಆಗಿದ್ದ "ಪ್ರಣವ ಕುಮಾರ್ ಝಾ" ಅವರು ಈ ಸಾಲಿನಲ್ಲಿ ಬಹಳ ವಿಶಿಷ್ಟವಾಗಿ ನಿಲ್ಲುತ್ತಾರೆ. 

ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ

- ವಂದನಾ ಎನ್

ವರ ನಟ ರಾಜ್ ಕುಮಾರ್ ರವರ ಹಾಲು ಜೇನು ಚಿತ್ರವೆಂದರೆ ನಮಗೆಲ್ಲಾ ಸಾಮಾನ್ಯವಾಗಿ ನೆನಪಾಗುವುದು ಮಧುರ ಗೀತೆಗಳು, ಮೃದು ಪ್ರೇಮ ಮತ್ತು ಮನಮುಟ್ಟುವ ದೃಶ್ಯಗಳ ಮೂಲಕ ಹೇಳಲಾದ ಒಂದು ಪ್ರೇಮಕಥೆ. ಆದರೆ ಪತಿ ಪತ್ನಿಯರ ನವಿರಾದ ಪ್ರೇಮಕತೆಯೊಳಗೆ ನನಗೆ ಕಾಡಿದ್ದು ನೈತಿಕ ಗೊಂದಲ. ಅದು ಚಿತ್ರ ಮುಗಿದ ಮೇಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು. 

ದೇಶ ಸುತ್ತು : ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ

- ವೆಂಕಟೇಶ್ ಶೇಷಗಿರಿ

ಪಿರಿಯಾಪಟ್ಟಣದ ಬೆಟ್ಟದಪುರದ ಸಮೀಪವಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತಬೇಕೆಂದು ನಿಶ್ಚಯಿಸಿ ಮೂರು ವಾರಗಳಿಂದ ಮುಂದೂಡುತ್ತಾ ಕೊನೆಗೂ ನವೆಂಬರ್ ೨೩ನೇ ತಾರೀಖು ಹತ್ತೋಣವೆಂದು ಅಂತಿಮ ನಿರ್ಧಾರ ಮಾಡಿ ನಾನು ಮತ್ತು ನನ್ನ ಗೆಳೆಯರೆಲ್ಲರೂ ಮೈಸೂರಿನಿಂದ ಹೊರಟೆವು. ೨೦೨೬ ಮೇ ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣಕ್ಕೆ ಹೋಗುವುದೆಂದು ಈಗಾಗಲೇ ಎಲ್ಲರೂ ನಿಶ್ಚಯಿಸಿ ಬುಕಿಂಗ್ ಮಾಡಿರುವುದರಿಂದ, ಪೂರ್ವ ತಯಾರಿಯಾಗಿ ರೀತಿಯ ಹಲವಾರು ಚಾರಣಗಳನ್ನು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಮಾಡಬೇಕಿದೆ. 

ಮನ್ನಿಸು ಶ್ರೀಹರಿಯೇ

- ರಾ. ಶಾಂ.

ನಿನ್ನ ಮರೆತೆನು ಶ್ರೀಹರಿಯೇ 
ಮನ್ನಿಸೆನ್ನನು

ಆತ್ಮ ಸಖಿ

- ರವಿಕುಮಾರ್ ಎಂ. ಎಸ್. 

ನೀ ಎಲ್ಲಿರುವೆ? ನಿನ್ನ ಬರುವಿಕೆಯ ಕನವರಿಕೆಯಲ್ಲಿ
ನೀ ಬರುವ ದಾರಿಯಲ್ಲಿ, ಕಾದಿರುವೆ ನಿರೀಕ್ಷೆಯಲ್ಲಿ

ಮನದ ಅಪಘಾತ

- ಮಂಜುನಾಥ್ ಪಿ.
ಮಳೆಯಲಿ ನಿನ್ನ ನೋಡಿದ ಆ ದಿನ 
ಜಗವನ್ನೇ ಮರೆತು ಬೆರಗಾದೆನಾ

ಹುಚ್ಚೇಗೌಡರ ಕತೆ - ಭಾಗ ೧

- ಮೋಹನ್ ಮೂರ್ತಿ ಮಾ. ಕೆಂ.

ಇದೆಲ್ಲಾ ನಡೆದದ್ದು 1998-99 ರಲ್ಲಿ. ಆವಾಗ ನಾನು ಮಂಡ್ಯದ ಸಮೀಪ ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೆ. ನಮ್ಮದು ಬಾಲಕರ ಕಾಲೇಜು. ಕಾಲೇಜಿನ ಕಟ್ಟಡ, ಹಾಸ್ಟೆಲ್ ಹಾಗೂ ಮೆಸ್ ಒಂದೇ ಆವರಣದಲ್ಲಿದ್ದವು. ನಮ್ಮ ಹಾಸ್ಟೆಲ್ ಮೆಸ್ ನಲ್ಲಿ  ಮದುವೆ ಮನೆಗಳಲ್ಲಿ ಊಟಕ್ಕೆ ಕೂರುವ ಪಂಕ್ತಿ ಸಾಲಿನಂತೆ ಊಟಕ್ಕೆ ಕೂರಬೇಕಿತ್ತು. ಎದುರು ಬದುರು ಸಾಲುಗಳ ನಡುವೆ ಓಡಾಡಲು ಸ್ಥಳಾವಕಾಶವಿದ್ದು ಮೆಸ್ ನ ಕೆಲಸಗಾರರು ಅಲ್ಲಿ ಓಡಾಡುತ್ತಾ ನಮಗೆ ಊಟ ಬಡಿಸುತ್ತಿದ್ದರು. ಕೆಲವರಿಗೆ ವಿಶೇಷ ಮನವಿಯ ಮೇರೆಗೆ ಊಟವಾದ ನಂತರ ಹಾಲು ಕೊಡುತ್ತಿದ್ದರು. ಆ ಫಲಾನುಭವಿಗಳಲ್ಲಿ ನಾನೂ ಕೂಡ ಒಬ್ಬನಾಗಿದ್ದೆ. ಈ ಮೆಸ್ ನ ಮೇಲ್ವಿಚಾರಕರಾಗಿದ್ದದ್ದು ಹುಚ್ಚೇಗೌಡರು.

ಕೋಶ ಓದು : ದಾಟು

- ರವಿಕುಮಾರ್ ಎಂ.ಎಸ್.

ದಾಟು ಕಾದಂಬರಿ ಪ್ರಕಟವಾಗಿದ್ದು 1973 ರಲ್ಲಿ. ಅಂದಿನ ಕಾಲಘಟ್ಟದಲ್ಲಿ ಅಸಮಾನತೆಯ ಗ್ರಾಮೀಣ ಮತ್ತು ನಗರ ಜೀವನ ಹೇಗೆ ಪರಿವರ್ತನೆಯ ಹಾದಿಯಲ್ಲಿ ಸಾಗಿತ್ತು ಎಂಬ ಚಿತ್ರಣವನ್ನು ಈ ಕೃತಿ ದಾಖಲಿಸುತ್ತಾ ಹೋಗುತ್ತದೆ. ಈ ಕಾದಂಬರಿಯು ತಿಮಲಾಪುರ ಎಂಬ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವರ್ಗಗಳ ನಡುವೆ ನಡೆಯುವ ಜೀವನದ ಅನಾವರಣವಾಗಿ ತೆರೆದುಕೊಳ್ಳುತ್ತದೆ. 

ಯುದ್ಧ ದಾಹ

- ಮೌನ

ಬೀಭತ್ಸ ಯುದ್ಧದ ಕ್ರೌರ್ಯಕೆ 

ರಕ್ತ ಒಸರುವ, ಕೀವು ಜಿನುಗುವ ಎಂದೂ ಮಾಯದ 

ಮನಸ್ಸಿನ ಗಾಯಗಳಿಗೆ

ಮುಲಾಮುಂಟೆ ಈ ಜಗದಲಿ